16
Advtisement
Plasement 2

???????? ?????? ???? ???? ???? - ???? ?????????? ?????? ??????????


ರಾಮ ದಶರಥರಾಮ ನಿಜ ಸತ್ಯ-
ಕಾಮ ನಮೋ ನಮೋ ಕಾಕುತ್ಥ್ಸರಾಮ ॥

ಕರುಣಾನಿಧಿ ರಾಮ ಕೌಸಲ್ಯಾನಂದನ ರಾಮ
ಪರಮ ಪುರುಷ ಸೀತಾಪತಿರಾಮ ।
ಶರಧಿ ಬಂಧನ ರಾಮ ಸವನ ರಕ್ಷಕ ರಾಮ
ಗುರುತರ ರವಿವಂಶ ಕೋದಂಡ ರಾಮ ॥

ದನುಜಹರಣ ರಾಮ ದಶರಥಸುತ ರಾಮ
ವಿನುತಾಮರ ಸ್ತೋತ್ರ ವಿಜಯರಾಮ ।
ಮನುಜಾವತಾರಾ ರಾಮ ಮಹನೀಯ ಗುಣರಾಮ
ಅನಿಲಜಪ್ರಿಯ ರಾಮ ಅಯೋಧ್ಯರಾಮ ॥

ಸುಲಲಿತಯಶ ರಾಮ ಸುಗ್ರೀವ ವರದ ರಾಮ
ಕಲುಷ ರಾವಣ ಭಯಂಕರ ರಾಮ ।
ವಿಲಸಿತ ರಘುರಾಮ ವೇದಗೋಚರ ರಾಮ
ಕಲಿತ ಪ್ರತಾಪ ಶ್ರೀವೇಂಕಟಗಿರಿ ರಾಮ ॥